ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. == ಜನನ ಜೀವನ == ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು. ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ. == ಕೃತಿಗಳು == === ಸಾಹಿತ್ಯ ಕೃತಿ === ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು === ಕವನ ಸಂಕಲನ === ನಾವು ಪ್ರಾಮಾಣಿಕರೇ ಮತ್ತೆ ಚಿತ್ತಾರ ಬರೆ ಗೆಳತಿ === ಕಥಾ ಸಂಕಲನ === ಮುಖಾಮುಖಿ ಭೂಮಿ ದುಂಡಗಿದೆ ಮನೆಲೆಕ್ಕ === ಕಾದಾಂಬರಿ === ಯಾರಿಗೆ ಯಾರುಂಟು? === ಪ್ರಬಂಧ ಸಂಕಲನ === ಹೊಸ್ತಿಲಿಂದೀಚೆಗೆ === ವಿಮರ್ಶಾ ಕೃತಿ === ಕಯ್ಯಾರರ ಕಾವ್ಯ == ಪ್ರಶಸ್ತಿಗಳು == ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರಾಜ್ಯ ಮಟ್ಟದ ಪ್ರಶಸ್ತಿ ಕೌದೆಆಂಡಾಲ್ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ == ಉಲ್ಲೇಖ ==